Actress Radhika Pandit's new movie launched today (December 1st). Radhika Pandit is paired up with RangiTaranga fame actor Nirup Bhandari. The movie will be produced by Rockline Venkatesh. <br /> <br />ನಾಳೆ ಲಾಂಚ್ ಆಗಲಿದೆ ರಾಧಿಕಾ ಪಂಡಿತ್ ಹೊಸ ಸಿನಿಮಾ. ನಟಿ ರಾಧಿಕ ಪಂಡಿತ್ ಮದುವೆಯ ಬಳಿಕ ಹೊಸ ಸಿನಿಮಾ ಮಾಡುವ ಸುದ್ದಿ ಕೆಲ ತಿಂಗಳ ಹಿಂದೆ ಹರಿದಾಡಿತ್ತು. ಆದರೆ ನಾಳೆ ಆ ಚಿತ್ರದ ಮುಹೂರ್ತ ಕಾರ್ಯಕ್ರಮದ ನಡೆಯಲಿದೆ.ರಾಧಿಕಾ ಪಂಡಿತ್ ಅವರ ಹೊಸ ಸಿನಿಮಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ್ದ ನಿರ್ದೇಶಕಿ ಪ್ರಿಯಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಅವರು ಮೂರು ಚಿತ್ರವನ್ನು ನಿರ್ದೇಶಿಸಿದ್ದಾರೆ.ರಾಧಿಕಾ ಪಂಡಿತ್ ಅವರ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿಲ್ಲ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹೀರೋ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ಇನ್ನು 'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ ಈ ಚಿತ್ರದ ಹೀರೋ ಆಗಿದ್ದು, ಚಿತ್ರದ ಟೈಟಲ್ ಇನ್ನು ಬಹಿರಂಗ ಆಗಿಲ್ಲ. <br />